ಬಸವಕಲ್ಯಾಣ: ಬೈಕ್ ಮತ್ತು ಗೂಡ್ಸ್ ವಾಹನಗಳ ಮಧ್ಯೆ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಗೌರ್ ಮತ್ತು ಖಂಡಳಾ ಗ್ರಾಮದ ಬಳಿ ಜರುಗಿದೆ. ಶರಣಪ್ಪ ಅಣ್ಣೆಪ್ಪ ಬಿರಾದಾರ (60) ಘಟನೆಯಲ್ಲಿ ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ