ಕೆ.ಆರ್. ನಗರದಲ್ಲಿ ನಡೆದ ನಾಮಧಾರಿ ಸಮುದಾಯ ಭವನದ ಬೆಳ್ಳಿಹಬ್ಬದ ಸಮಾರಂಭದಲ್ಲಿ ಬಹಳ ಸಂತೋಷಪೂರ್ವಕವಾಗಿ ಪಾಲ್ಗೊಳ್ಳಲಾಯಿತು. ಅರ್ಥಪೂರ್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಗೌರವವನ್ನು ತಂದರು. ಜೊತೆಗೆ ಮಾಜಿ ಮಂತ್ರಿಗಳಾದ ಶ್ರೀ ಸಾ.ರಾ. ಮಹೇಶ್, ಶ್ರೀ ಹೆಚ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಂಜೇಗೌಡ, ಶ್ರೀ ವಿವೇಕಾನಂದ, ಕ್ಷೇತ್ರದ ಶಾಸಕರಾದ ಶ್ರೀ ರವಿಶಂಕರ್, ಮಾಜಿ ಶಾಸಕರಾದ ಶ್ರೀ ಅಶ್ವಿನ್ ಕುಮಾರ್ ಹಾಗೂ ನಾಮಧಾರಿ ಸಮುದಾಯದ ಮುಖಂಡರಾದ ಶ್ರೀ ಅಶೋಕ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದು ಸಮಾರಂಭಕ್ಕೆ ಹೆಚ್ಚಿನ ಅರ್ಥವತ್