ಹುಬ್ಬಳ್ಳಿ ಧಾರವಾಡ ನಗರವನ್ನು ಮತ್ತಷ್ಟು ಸುಂದರ ಮತ್ತು ಸ್ವಚ್ಛವಾಗಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ವಿಶೇಷ ಪ್ರಯತ್ನ ಮಾಡಲಾಗಿದ್ದು.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಿಗಾಗಿ ಇಂದು ವಿಶೇಷ ಸಾಮರ್ಥ್ಯಭಿವೃದ್ಧಿ ತರಬೇತಿ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ನಗರದ ಸ್ವಚ್ಛತೆಯಲ್ಲಿ ಪಾಲಿಕೆ ಸದಸ್ಯರು ವಹಿಸಬೇಕಾದ ಪ್ರಮುಖ ಪಾತ್ರದ ಬಗ್ಗೆ ಚರ್ಚೆಸಲಾಯಿತ. ಕಸವನ್ನು ಕೇವಲ ವಿಲೇವಾರಿ ಮಾಡುವುದಲ್ಲ, ಅದನ್ನು ವೈಜ್ಞಾನಿಕವಾಗಿ ನಿರ್ವಹಿಸುವ ನವೀನ ತಂತ್ರಗಳ ಬಗ್ಗೆ ಮಾಹಿತಿ ನೀಡಲಾಯಿತು.