ಸಿಂಧನೂರು: ಅಬಕಾರಿ ಅಧಿಕಾರಿಗಳಿಂದ ದಾಳಿ 10 ಲೀಟರ್ ಬೆಲ್ಲದ ಕೊಳೆ ಹಾಗೂ ಎರಡು ಲೀಟರ್ ಕಳ್ಳ ಭಟ್ಟಿ ಸರಾಯಿ ವಶ
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿ ತಂಡದಲ್ಲಿ ಜ್ಯೋತಿ ಗಂಡ ಕುಮಾರ ಎಂಬಾಕೆಯು ತನ್ನ ವಾಸದ ಮನೆಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸರಾಯಿಯನ್ನು ಸಂಗ್ರಹಿಸಿ ಇಟ್ಟಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕಳ್ಳಬಟ್ಟಿಸರಾಯಿ ಮತ್ತು ಬೆಲ್ಲದ ಕೊಳೆಯನ್ನು ಅಬಕಾರಿ ಇಲಾಖೆ ಲಿಂಗಸುಗುರು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.