ಸಿದ್ದಾಪುರ: ಪಟ್ಟಣ ಪಂಚಾಯತ್ ಆವರಣದಲ್ಲಿ 'ನಗರೋತ್ಥಾನ ಹಂತ-೪' ಯೋಜನೆಯಡಿ ಫಲಾನುಭವಿಗಳಿಗೆ ಸೋಲಾರ್ ವಾಟರ್ ಹೀಟರ್ ಹಾಗೂ ಸೋಲಾರ್ ದೀಪಗಳನ್ನು ಶಾಸಕ ಭೀಮಣ್ಣ ನಾಯ್ಕ ವಿತರಿಸಿ ನಂತರ ಮಾತನಾಡಿ, ಸೌರಶಕ್ತಿಯು ವಿದ್ಯುತ್ ಬಿಲ್ ಉಳಿತಾಯ ಮಾಡುವುದಲ್ಲದೆ, ಲೋಡ್ ಶೆಡ್ಡಿಂಗ್ ಸಮಯದಲ್ಲಿ ಬೆಳಕಿನ ಆಸರೆಯಾಗಲಿದೆ.. ಪ್ರತಿಯೊಂದು ಮನೆಯೂ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂಬ ಆಶಯದೊಂದಿಗೆ ಈ ಸೌಲಭ್ಯ ನೀಡಲಾಗಿದ್ದು, ಉಪಕರಣಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ದೀರ್ಘಕಾಲ ಬಳಸುವಂತೆ ಫಲಾನುಭವಿಗಳಿಗೆ ಕಿವಿಮಾತು ಹೇಳಿದರು.