ವಿಶೇಷ ಸಂಪನ್ಮೂಲ ಶಿಕ್ಷಕರಾಗಿ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿ ವಯೋನಿವೃತ್ತರಾದ ಮುರುಗೇಂದ್ರ ಮಸಳಿ ಅವರ ಅಭಿನಂದನಾ ಹಾಗೂ ಷಷ್ಠಿಅಬ್ಧಿ ಸಮಾರಂಭ ಇಂದು ಅಫಜಲಪುರ ಪಟ್ಟಣದಲ್ಲಿ ನಡೆಯಿತು. ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ, ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರ ಸಮ್ಮುಖದಲ್ಲಿ ಭಾನುವಾರ 2 ಗಂಟೆಗೆ ನಡೆದ ಕಾರ್ಯಕ್ರಮಕ್ಕೆ ಶಾಸಕ ಎಂ. ವೈ. ಪಾಟೀಲ ಉದ್ಘಾಟನೆ ನೇರವೇರಿಸಿದರು.ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬಿದ ಮುರುಗೇಂದ್ರ ಮಸಳಿ ಅವರ ಸೇವೆ ಸ್ಮರಿಸಲಾಯಿತು.