ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ನೀಡುವ ಘಟನೆ ನಡೆದಿದೆ. ನೆಲಮಂಗಲದಲ್ಲಿ ದಾಕ್ಷಾಯಿಣಿ ಎಂಬ ಮಹಿಳೆಯನ್ನು ಕೊಡಲಿಯಿಂದ ಕತ್ತು ಸೀಳಿ ಕೊಲೆ ಮಾಡಿದ ಆರೋಪಿಯು, ಬಳಿಕ ದೊಡ್ಡಬಳ್ಳಾಪುರ ತಾಲ್ಲೂಕಿನ ಕೊಳೂರಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಆರೋಪಿ ವೀರಭದ್ರಯ್ಯ ಡೆತ್ ನೋಟ್ ಬರೆದಿಟ್ಟು ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಡೆತ್ ನೋಟ್ನಲ್ಲಿ ದಾಕ್ಷಾಯಿಣಿಗೆ ವರ್ಷಗಳಿಂದ ಲಕ್ಷಾಂತರ ಹಣ ಹಾಗೂ ಬೆಲೆಬಾಳುವ ಒಡವೆಗಳನ್ನು ನೀಡಿದ್ದಾಗಿ, ಸಂಬಂಧದಲ್ಲಿ ಬೇರೊಬ್ಬ ವ್ಯಕ್ತಿಯ ಎಂಟ್ರಿಯಿಂದ ಬಿರುಕು ಉಂಟಾಗಿ ಹಣ–ಒಡವೆ ವಾಪಾಸ್ ಕೇಳಿದಾಗ ತಮಗೆ ಧಮ್ಕಿ ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾನೆ. ಇದರಿಂದ ರೊಚ್ಚಿಗೆದ್ದು ದಾಕ್ಷಾಯಿಣಿಯನ್ನು ಕೊಲೆ ಮಾಡಿದ ಆರೋಪವಿದೆ.