ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷ ಅಡ್ಡೂರು ಶ್ರೀನಿವಾಸುಲು ಅವರು ಆಳಂದ ಉಪವಿಭಾಗದ ಅಂತರ್ರಾಜ್ಯ ಗಡಿ ಭಾಗದ ಅಪರಾಧ ಕುರಿತ ಸಭೆ ನಡೆಸಿದರು. ಗಡಿ ಪ್ರದೇಶದಲ್ಲಿ ನಡೆದ ಘೋರ ಅಪರಾಧಗಳು, ಪತ್ತೆಯಾದ ಪ್ರಕರಣಗಳ ಆರೋಪಿ ಪತ್ತೆ, ಕಾಣೆಯಾದವರ ಪ್ರಕರಣಗಳು ಮತ್ತು ಗುರುತಿಸಲಾಗದ ಮೃತ ದೇಹಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮನ್ವಯ ಬೆಳೆಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಎಂದು ಸೋಮವಾರ 7 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ.