ಹುಬ್ಬಳ್ಳಿಯ ಕುಸುಗಲ್ ಬಳಿ ವೇಗವಾಗಿ ಹೊರಟಿದ್ದ ಬೈಕ್ ಸವಾರ ಪಾದಚಾರಿಗೆ ಗುದ್ದಿದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮಾನಸಿಕ ಅಸ್ವಸ್ಥನಿಗೆ ಬೈಕ್ ಸವಾರ ಗುದ್ದಿದ್ದು, ಮಾನಸಿಕ ಅಸ್ವಸ್ಥನ ಕಾಲಿಗೆ ಪೆಟ್ಟು ಬಿದ್ದಿದೆ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮೃತನ ಗುರುತು ಇನ್ನುವರೆಗೆ ಪತ್ತೆಯಾಗಿಲ್ಲ ಎನ್ನಲಾಗಿದೆ