ಸಿಂಧನೂರು: ಗುಂಡ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲು ಶಾಸಕ ಆರ್ ಬಸನಗೌಡ ಭೂಮಿ ಪೂಜೆ
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಂಡ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲು ಶಾಸಕರು ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷರಾದ ಆರ್ ಬಸನಗೌಡ ತುರುವಿಹಾಳ ಭೂಮಿ ಪೂಜ ನೆರವೇರಿಸಿ ತದನಂತರ ಮಾತನಾಡಿದ ಅವರು ಈ ಕಾಮಗಾರಿಯನ್ನು ನಾಲ್ಕು ಕೋಟಿ ರೂಗಳ ವೆಚ್ಚದಲ್ಲಿ ಮಾಡಲಾಗುತ್ತಿದ್ದು ಸುಸರ್ಜಿತವಾಗಿ ಕಟ್ಟಡಗಳನ್ನು ಕಟ್ಟಬೇಕು ಒಂದು ವೇಳೆ ಕಳಪೆ ಕಂಡು ಬಂದರೆ ಗ್ರಾಮಸ್ಥರು ನನ್ನ ಗಮನಕ್ಕೆ ತರಬೇಕು ಎಂದು ಮಾತನಾಡಿದರು ತದನಂತರ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು ಕಾಲಮಿತಿಯಲ್ಲಿ ಕಾಮಗಾರಿಯನ್ನು ಮಾಡಬೇಕೆಂದು ಹೇಳಿದರು.