ಜ 15 ರಂದು ಹವ್ಯಕ ಭವನ ಕಟ್ಟಡ ಕ್ಕೆ ಅಡಿಗಲ್ಲು ಸಮಾರಂಭ,ಸ್ವರ್ಣ ವಲ್ಲಿ ಶ್ರೀ ಸಾನಿಧ್ಯ ಯಲ್ಲಾಪುರ ಜ ೧೫ ರಂದು ಸ್ವರ್ಣವಲ್ಲೀ ಪೂಜ್ಯ ಶ್ರೀಮದ್ ಗಂಗಾಧರೇAದ್ರ ಸರಸ್ವತೀ ಮಹಾಸ್ವಾಮಿಗಳ ಮತ್ತು ಶ್ರೀಮದ್ ಆನಂದಬೋಧೇAದ್ರ ಸರಸ್ವತೀ ಮಹಾಸ್ವಾಮಿಗಳ ಅಮೃತಹಸ್ತದಲ್ಲಿ ಸುಮಾರು ೮ ಕೋಟಿ ರೂಗಳಿಗೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹವ್ಯಕ ಭವನದ ನೂತನ ಕಟ್ಟಡದ ಭೂಮಿಪೂಜೆ, ಅಡಿಗಲ್ಲು ಸಮಾರಂಭ ನೆರವೇರುವುದು ಎಂದು ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ ಮತ್ತು ಕಟ್ಟಡ ಸಮಿತಿಯ ಅಧ್ಯಕ್ಷ ಮಾರುತಿ ಘಟ್ಟಿ ಹೇಳಿದರು.