ದೇವನಹಳ್ಳಿಯಲ್ಲಿ ಶಿಡ್ಲಘಟ್ಟ ಪೌರಾಯುಕ್ತೆ ಅಮೃತ ಗೌಡಗೆ ಧಮ್ಕಿ ಹಾಕಿದ ಆರೋಪ ಸಂಬಂಧ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ. ಈ ಬಗ್ಗೆ ಮಾತನಾಡಿದ ಸಚಿವ ಕೆ.ಹೆಚ್. ಮುನಿಯಪ್ಪ, “ನಾನು ರಾಜೀವ್ ಗೌಡ ಪರ ಬ್ಯಾಟ್ ಬೀಸಿಲ್ಲ. ಮಾಡಿರುವುದು ತಪ್ಪು ಎಂದು ಸ್ಪಷ್ಟವಾಗಿ ಹೇಳಿದ್ದೇನೆ” ಎಂದರು. ಆದರೆ ರಾಜೀವ್ ಗೌಡ ಕಳೆದ ಹತ್ತು ವರ್ಷಗಳಲ್ಲಿ ಕುಡಿಯುವ ನೀರು, ಆಸ್ಪತ್ರೆಗೆ ಆಂಬ್ಯುಲೆನ್ಸ್, ಮದುವೆ ಮುಂಜಿ ಹಾಗೂ ದೇವಾಲಯಗಳಿಗೆ ನೆರವು ಸೇರಿದಂತೆ ಹಲವು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದರು. ಹತ್ತು ವರ್ಷಗಳಲ್ಲಿ ಒಂದೇ ಒಂದು ದೂರು ಇರಲಿಲ್ಲ, ಇದು ಅಕಸ್ಮಾತ್ ಆಗಿ ನಡೆದ ತಪ್ಪು ಎಂದು ಹೇಳಿದರು.