ರಾಜ್ಯಸರ್ಕಾರ ದ ಇಚ್ಛಾಶಕ್ತಿಯ ಕೊರತೆಯಿಂದ ಜನಸಾಮಾನ್ಯರು ಅರಣ್ಯ ಭೂಮಿಯ ಹಕ್ಕಿನಿಂದ ವಂಚಿತರಾಗುವ ಅಪಾಯ ಎದುರಿಸುತ್ತಿದ್ದಾರೆ.ಆದರೂ ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವ 3 ಎಕರೆ ಒಳಗಿನ ಒತ್ತುವರಿದಾರರು ಭಯ ಪಡುವ ಅಗತ್ಯವಿಲ್ಲ,ರಾಜ್ಯ ಸರ್ಕಾರ ಅವರ ಹಿತರಕ್ಷಣೆ ಮಾಡುವ ಭರವಸೆ ನೀಡಿದೆ ಎಂದು ಉತ್ತರಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಹೇಳಿದರು. ಅವರು ಪಟ್ಟಣದ ಟೀಡ್ ಟ್ರಸ್ಟನ ಶಿವಪ್ಪ ಪೂಜಾರಿ ಸಭಾಭವನದಲ್ಲಿ ಟೀಡ್ ಟ್ರಸ್ಟ, ಭೂಹಕ್ಕುಗಳ ಹೋರಾಟ ಸಮಿತಿಗಳ ಒಕ್ಕೂಟ ಮತ್ತು ಬಡಕಟ್ಟು ಜನರ ಜಂಟಿ ಕ್ರೀಯಾ ವೇದಿಕೆಯಆಶ್ರಯದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು