ಮದ್ದೂರು ಗಲಾಟೆ ವಿಚಾರ ಕುರಿತಂತೆ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು ಕರ್ನಾಟಕ ಮುಸಲ್ಮಾನ ರಾಜ್ಯವಾಗುತ್ತಿದೆ ಎಂದು ಹೇಳಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೇರವಾಗಿ ಮುಸ್ಲಿಮರಿಗೆ ಬೆಂಬಲ ನೀಡುವ ಕೆಲಸ ಆಗುತ್ತಿದೆ ಡಿಜೆ ಹಳ್ಳಿ, ಕೆಜೆ ಹಳ್ಳಿ ಘಟನೆ ಆದ್ರೂ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ. ಮುಸಲ್ಮಾನರ ಪರವಾಗಿದ್ದೇವೆಂಬ ಭಾವನೆ ಸರ್ಕಾರ ಮಾಡ್ತಿದೆ. ಕೆಟ್ಟ ಮನಸ್ಥಿತಿಯ ಮುಸ್ಲಿಮರಿಗೆ ರಾಜ್ಯ ಸರ್ಕಾರ ನಮ್ಮದು ಅಂತ ಅನಿಸುತ್ತಿದೆ ಎಂದರು.