Download Now Banner

This browser does not support the video element.

ಕೊಳ್ಳೇಗಾಲ: ಕೊಳ್ಳೇಗಾಲದಲ್ಲಿ ವನ್ಯಜೀವಿ ಜಾಗೃತಿ ಕಾರ್ಯಕ್ರಮ: ಸಿಐಡಿ ಅರಣ್ಯ ಸಂಚಾರಿ ದಳದಿಂದ ವಿದ್ಯಾರ್ಥಿಗಳಿಗೆ ಅರಿವು

Kollegal, Chamarajnagar | Sep 4, 2025
ಕೊಳ್ಳೇಗಾಲ: ಯುವ ಪೀಳಿಗೆಗೆ ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರದ ಮಹತ್ವವನ್ನು ತಿಳಿಸಲು ಸಿಐಡಿ ಅರಣ್ಯ ಸಂಚಾರಿ ದಳದಿಂದ ವನ್ಯಜೀವಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕೊಳ್ಳೇಗಾಲ ಪಟ್ಟಣದ ಎಸ್.ವಿ.ಕೆ ಬಾಲಕಿಯರ ಕಾಲೇಜಿನಲ್ಲಿ ಗುರುವಾರ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಿಐಡಿ ಅರಣ್ಯ ಸಂಚಾರಿ ದಳದ ಎಸ್‌ಐ ವಿಜಯರಾಜ್ ಅವರು ಭಾಗವಹಿಸಿ, ಬಳಿಕ‌ ಮಾತನಾಡಿ ವನ್ಯಜೀವಿಗಳು ಪರಿಸರ ಸಮತೋಲನದ ಪ್ರಮುಖ ಅಂಶಗಳು. ಅವುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಮಾಡುವುದು ಮತ್ತು ವ್ಯಾಪಾರ ಮಾಡುವುದನ್ನು ತಡೆಯುವುದು ಮಾತ್ರವಲ್ಲ, ಅವುಗಳ ತಾಣವನ್ನು ಸಂರಕ್ಷಿಸುವುದೂ ಅತಿ ಅವಶ್ಯಕಎಂದರು.
Read More News
T & CPrivacy PolicyContact Us