ಮದ್ದೂರು ತಾಲ್ಲೂಕು ಕೆ.ಎಂ,ದೊಡ್ಡಿಯ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಗಣಪತಿ ಹೋಮ ಜರುಗಿತು. ಪ್ರಧಾನ ಅರ್ಚಕರಾದ ನರಸಿಂಹ ಭಟ್ಟರ್ ಅವರ ನೇತೃತ್ವದಲ್ಲಿ ನಡೆದ ಗಣಪತಿ ಹೋಮದಲ್ಲಿ ಭಕ್ತಾಧಿಗಳು ಭಾಗವಹಿಸಿ ಪೂಜೆಸಲ್ಲಿಸಿದರು. ಕೆ.ಎಂ.ದೊಡ್ಡಿ ಭಾಗದ ಜನತೆ ಸೇರಿದಂತೆ ನಾಡಿನ ಸಮಸ್ತ ಜನತೆಗೆ ಒಳಿತು ಉಂಟುಮಾಡಲಿ ಎಂಬ ಉದ್ದೇಶದಿಂದ ಗಣಪತಿ ಹೋಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಅರ್ಚಕರಾದ ನರಸಿಂಹ ಭಟ್ಟರ್ ಅವರು ತಿಳಿಸಿದರು. ದೇವಾಲಯದ ಆವರಣದಲ್ಲಿ ಮಾರಿಗುಡಿ ವಿನಾಯಕ ಗೆಳೆಯರ ಬಳಗದಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆಸಲ್ಲಿಸಿದ್ದಾರೆ. ಬಂದಂತಹ ಭಕ್ತಾಧಿಗಳಿಗೆ ಸಂಜೆ 6 ಗಂಟೆಯಲ್ಲಿ ಪ್ರಸಾದ ವಿತರಣೆ ಮಾಡಿದರು.