ಬಾಗಲಕೋಟೆ ನಗರದಲ್ಲಿ ನವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದೆ. ಬಾಗಲಕೋಟೆ ನಗರದ ಆರಾಧ್ಯ ದೈವ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಭಕ್ತರು ದೇವಿಗೆ ಐವತ್ತಾರು ಬಗೆಯ ಆಹಾರ ಖಾದ್ಯಗಳನ್ನು ನೈವೇದ್ಯದ ರೂಪದಲ್ಲಿ ಸಮರ್ಪಣೆ ಮಾಡುವುದರ ಮೂಲಕ "ಛಪ್ಪನ್ನ್ ಭೋಗ" ಪದ್ದತಿಯನ್ನ ಶ್ರದ್ಧಾಭಕ್ತಿಗಳಿಂದ ನೆರವೇರಿಸಿದರು. ಸಹಸ್ರಾರ್ಜುನ ಸೋಮವಂಶೀಯ ಕ್ಷತ್ರೀಯ ಸಮಾಜದ ಬಾಂಧವರ ನೇತೃತ್ವದಲ್ಲಿ ಶಾಸ್ತ್ರಗಳಲ್ಲಿ ಉಕ್ಕೇಖಿಸಿದಂತೆ ನವರಾತ್ರಿಯ ಅಷ್ಟಮಿಯ ದಿನದಂದು ಛಪ್ಪನ್ನ್ ಭೋಗ ಅರ್ಪಿಸುವುದು ವಾಡಿಕೆ.