ಯಾದಗಿರಿ ಜಿಲ್ಲೆಯ ಸುರಪುರ ನಗರದ ಅಂಬೇಡ್ಕರ್ ವೃತ್ತದ ಹಿಂಭಾಗದಲ್ಲಿನ ಭೂಮಿ ಮಂಜೂರಾತಿಗಾಗಿ ಆಗ್ರಹಿಸಿ ಭಾನುವಾರ ಬೆಳಗ್ಗೆಯಿಂದ ಸಂಘ ಮಿತ್ರ ಮಹಿಳಾ ಒಕ್ಕೂಟ ಧರಣಿ ಆರಂಭಿಸಲಾಗಿದೆ. ಧರಣಿಯಲ್ಲಿ ಭಾಗವಹಿಸಿರುವ ಒಕ್ಕೂಟದ ಮುಖಂಡರು ಹಾಗೂ ಅನೇಕ ಜನ ಮಹಿಳೆಯರು ಅಂಬೇಡ್ಕರ್ ವೃತ್ತದ ಹಿಂಭಾಗದಲ್ಲಿರುವ ಸರ್ವೆ ನಂಬರ್ 7/1 ರಲ್ಲಿನ ಭೂಮಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ಮಂಜೂರು ಮಾಡಬೇಕು ಎಂದು ಘೋಷಣೆಗಳನ್ನು ಕೂಗಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಧರಣಿಯನ್ನು ಉದ್ದೇಶಿಸಿ ವಕೀಲರಾದ ಶರ್ಮಿಳಾ ಕರಡಕಲ್ ಮಾತನಾಡಿದರು.