ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿ ಏಳು ಜನ ಯುವತಿಯರ ರಕ್ಷಣೆ ಮಾಡುರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ದೇಶಿಹಳ್ಳಿ ಹಾಗೂ ಬೆಮೆಲ್ ನಗರದಲ್ಲಿ ಮಂಗಳವಾರ ನಡೆದಿದೆ. ದೇಶಿಹಳ್ಳಿ ಹಾಗೂ ಬೆಮೆಲ್ ನಗರ ಮನೆಗಳಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆಯಲ್ಲಿ ಓರ್ವ ಆರೋಪಿ ಪರಾರಿ ಏಳು ಜನ ಹೊರರಾಜ್ಯದ ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣೆಯ ಸಿಪಿಐ ದಯಾನಂದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.