ಒಂಟಿತನದಿಂದ ಹೊರಬನ್ನಿ – ಆತ್ಮಹತ್ಯೆ ಅಲೋಚನೆಯನ್ನು ಹೋಗಲಾಡಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸವಿತಾ ಪಿ.ಆರ್ ತಿಳಿಸಿದರು.ಬುಧವಾರ ನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ತರಬೇತಿ ಕೇಂದ್ರ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ನಿಮ್ಮ ನೋವು ನಲಿವುಗಳನ್ನು ನಂಬಿಕಸ್ತರಲ್ಲಿ ಹಂಚಿಕೊಳ್ಳಿ, ಉತ್ತಮ ಸ್ನೇಹಿತರ ಸಂಪರ್ಕದಲ್ಲಿ ಸದಾ ಇರುವ ಮೂಲಕ ಒಂಟಿತನದಿಂದ ಹೊರಬನ್ನಿ ಎಂದರು.