ಶಿಕ್ಷಕಿಯ ವರ್ಗಾವಣೆ ರದ್ದಿಗೆ ಕಶೆಟ್ಟಿಪಲ್ಲಿ ಗ್ರಾಮದ ಶಾಲೆಗೆ ಬೀಗ ಜಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ ಶ್ರೀನಿವಾಸಪುರ : ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರನ್ನು ದುರುದ್ದೇಶದಿಂದ ವರ್ಗಾವಣೆ ಮಾಡಿರುವುದರ ಹಿನ್ನೆಲೆ ಇಲ್ಲಿನ ಶಾಲಾ ಮಕ್ಕಳು ಶಾಲೆಗೆ ಬೀಗ ಜಡಿದು ಪ್ರತಿಭಟನೆ ಮಾಡಿರುವ ಘಟನೆ ನಡೆದಿದೆ. ಶ್ರೀನಿವಾಸಪುರ ತಾಲ್ಲೂಕಿನ ಕಶೆಟ್ಟಿಪಲ್ಲಿ ಗ್ರಾಮದ ಉನ್ನತಿಕೃತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರಲಕ್ಷ್ಮಿ ಎಂಬ ಇಂಗ್ಲಿಷ್ ಭಾಷ ಶಿಕ್ಷಕಿ ಸುಮಾರು ೨೨ ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಅಲ್ಲಿನ ವಿದ್ಯಾರ್ಥಿಗಳ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಕಾರ್ಯವೈಖರಿಗೆ ಮೆಚ್ಚಿ ಖಾಸಗಿ ಶಾಲೆಯ ಮಕ್ಕಳು ಸಹ ಸ