ಮಧ್ಯರಾತ್ರಿ ಕೆಲವರು ಬೋಟ್‌ನಲ್ಲಿ ಅಶ್ರದ್ಧೆಯಿಂದ ವರ್ತಿಸಿ ಅಶುದ್ಧತೆ ಉಂಟುಮಾಡಿರುವ ಘಟನೆ ದೊಡ್ಡಕೆರೆಯಲ್ಲಿ ನಡೆದಿದೆ. ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಪ್ರಕಾಶ ಕೋಳಿವಾಡ ತಮ್ಮ ಪೇಸ್ ಬುಕ್ ಖಾತೆಯಲ್ಲಿ ದಯವಿಟ್ಟು ಇಂತಹ ಯೋಜನೆಗಳನ್ನು ದುರುಪಯೋಗ ಮಾಡಬೇಡಿ. ಪ್ರವಾಸೋದ್ಯಮಿಗಳ ವಿಶ್ವಾಸವನ್ನು ಕಾಪಾಡೋಣ. ದೊಡ್ಡಕೆರೆಯಲ್ಲಿ ಬೋಟಿಂಗ್ ಯೋಜನೆ ಒಂದು ಮಹತ್ವದ ಹಂತದಲ್ಲಿ ಸಾಗುತ್ತಿದೆ. ಇದನ್ನು ನಿಲ್ಲಿಸದೆ, ಯಶಸ್ವಿಯಾಗಿ ಮುನ್ನಡೆಸುವುದು ಎಲ್ಲರ ಜವಾಬ್ದಾರಿ. ಯಾರಾದರೂ ಅನಾಚಾರ/ಅನೌಚಿತ್ಯ ವರ್ತನೆ ನಡೆಸಿದರೆ, ದಯವಿಟ್ಟು ಸಮೀಪದವರ ಸಹಕಾರದಿಂದ ತಕ್ಷಣ ದೂರು ನೀಡಬೇಕು ಎಂದಿದ್ದಾರೆ.