Download Now Banner

This browser does not support the video element.

ಶಿರಾ: ಪಟ್ಟಣದ ಗಣೇಶ ಮೂರ್ತಿ ಪೆಂಡಾಲ್ ಗೆ ಶಾಸಕ ಯತ್ನಾಳ್ ಭೇಟಿ, ಹಿಂದೂ ಸಂಘಟನೆಯಿಂದ ಆತ್ಮೀಯ ಸ್ವಾಗತ

Sira, Tumakuru | Sep 13, 2025
ಶಿರಾ ಪಟ್ಟಣದ ಗವಿ ಆಂಜನೇಯಸ್ವಾಮಿ ದೇವಾಲಯ ಎದುರು ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ಪೆಂಡಾಲ್ ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿದ್ದರು. ಈ ವೇಳೆ ಹಿಂದೂ ಪರ ಕಾರ್ಯಕರ್ತರು ಅವರನ್ನ ಆತ್ಮೀಯವಾಗಿ ಸ್ವಾಗತಿಸಿದರು ಶನಿವಾರ ಸಂಜೆ 6 ರ ಸಮಯದಲ್ಲಿ ಯತ್ನಾಳ್ ಆಗಮಿಸಿ ಹಿಂದೂ ಮಹಾಗಣಪತಿಯ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವಿಶ್ವ ಹಿಂದೂ ಪರಿಷದ್, ಬಜರಂಗದಳ ಕಾರ್ಯಕರ್ತರು ಹಾಜರಿದ್ದರು. ತುಮಕೂರು ಜಿಲ್ಲೆ ಸೇರಿದಂತೆ ಅಕ್ಕಪಕ್ಕ ಜಿಲ್ಲೆಗಳಲ್ಲಿ ಗಣೇಶೋತ್ಸವ ಮೆರವಣಿಗೆ ನಡೆಯುತ್ತಿರುವುದರಿಂದ ಶಿರಾ ಪಟ್ಟಣದಲ್ಲಿ ಹಿಂದೂ ಸಂಘಟನೆ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯನ್ನ ಸಂಘಟನೆಯವರು ಮುಂದೂಡಿದ್ದಾರೆ.
Read More News
T & CPrivacy PolicyContact Us