Download Now Banner

This browser does not support the video element.

ಶೋರಾಪುರ: ಅರಳಹಳ್ಳಿ ಕ್ರಾಸ್ ಬಳಿ ಹೆದ್ದಾರಿ ಮೇಲೆ ಬಂದಿದ್ದ ಮೊಸಳೆ ಮೇಲೆ ಲಾರಿ ಹರಿದು ಸಾವು

Shorapur, Yadgir | Aug 29, 2025
ಸುರಪುರ ತಾಲೂಕಿನ ಅರಳಹಳ್ಳಿ ಕ್ರಾಸ್ ಬಳಿಯ ಹೆದ್ದಾರಿ ಮೇಲೆ ಬಂದಿದ್ದ ಮೊಸಳೆಯ ಮೇಲೆ ಲಾರಿ ಹರಿದು ಮೊಸಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ಮಧ್ಯಾನ ನಡೆದಿದೆ. ನಿರಂತರ ಮಳೆಯಿಂದಾಗಿ ನದಿ ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಆ ನೀರಿನಲ್ಲಿ ಮೊಸಳೆ ಕೊಚ್ಚಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದು, ರಸ್ತೆಯ ಪಕ್ಕದಲ್ಲಿರುವ ದೊಡ್ಡ ಗಾತ್ರದ ನಡುವಿನಲ್ಲಿ ನೀರು ನಿಂತಿದ್ದು ಆ ನೀರಿನಲ್ಲಿ ಎರಡು ಮೊಸಳೆಗಳಿರುವ ಕುರಿತು ಸಾರ್ವಜನಿಕರು ಹೇಳುತ್ತಿದ್ದು, ಒಂದು ಮೊಸಳೆ ರಸ್ತೆಯ ಮೇಲೆ ಬಂದಾಗ ಅಪರಿಚಿತ ಲಾರಿ ಹರಿದು ಮೊಸಳೆ ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಇನ್ನೊಂದು ಮೊಸಳೆ ಇರುವ ಕುರಿತು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.
Read More News
T & CPrivacy PolicyContact Us