ಮಳವಳ್ಳಿ : ರಾಯಚೂರಿನ ಸಿಂಧನೂರಿಲ್ಲಿ ನಡೆಯುತ್ತಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 12 ರಾಜ್ಯ ಮಟ್ಟದ ಸಮ್ಮೇಳನಕ್ಕೆ ಮಳವಳ್ಳಿ ತಾಲೂಕಿನಿಂದಲೂ ಸಂಘಟನೆಯ ಪ್ರತಿನಿಧಿಗಳು ಪ್ರಯಾಣ ಬೆಳೆಸಿ ದರು. ಪ್ರಯಾಣಕ್ಕೂ ಮುನ್ನ ಶುಕ್ರವಾರ ಮಧ್ಯಾಹ್ನ 1ಗಂಟೆ ಸಮಯದಲ್ಲಿ ಮಳವಳ್ಳಿ ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನೆರೆದ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತೆಯರು ಸಮ್ಮೇಳನದ ಪರ, ಜನವಾದಿ ಮಹಿಳಾ ಸಂಘಟನೆಯ ಪರ ಹಾಗೂ ಮಹಿಳಾ ಹೋರಾಟದ ಪರ ಘೋಷಣೆಗಳನ್ನು ಕೂಗಿದರು.