ಚಾಮರಾಜನಗರ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಕಾಡಂಚಿನ ಗ್ರಾಮಗಳಾದ ಬೆಜ್ಜಲಪಾಳ್ಯ, ಬಾನವಾಡಿ ಗ್ರಾಮದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ರಸ್ತೆಗಳು ಗ್ರಾಮಗಳ ಅಭಿವೃದ್ದಿಯ ಸಂಕೇತವಾಗಿದ್ದು, ಬೆಜ್ಜಳಪಾಳ್ಯ ಗ್ರಾಮದಲ್ಲಿ ಎಸ್ಸಿಪಿ ಯೋಜನೆಯಡಿಯಲ್ಲಿ ೫೦ ಲಕ್ಷರೂ. ಬಾನವಾಡಿ ಗ್ರಾಮಕ್ಕೆ ಟಿಎಸ್ಪಿ ಯೋಜನೆಯಡಿ ೫೦ ಲಕ್ಷರೂ ಸೇರಿದಂತೆ ೧ಕೋಟಿ ರೂ. ವೆಚ್ಚದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ಗ್ರಾಮಸ್ಥರು ಮುಂದೆನಿಂತು ಗುಣಮಟ್ಟದ ರಸ್ತೆ ನಿರ್ಮಿಸಿಕೊಳ್ಳಬೇಕು ಎಂದರು