ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಮಹಮ್ಮದ ಪೈಗಂಬರ್‌ವರ ೧೫೦೦ ನೇ ಜನ್ಮದಿನದ ಅಂಗವಾಗಿ ಸೆ.೦೫ ರಂದು ಮೆರವಣಿಗೆ ನಡೆಯುತ್ತಿದ್ದರಿಂದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮುಸ್ಲೀಂ ಭಾಂಧವರು ಪಾಲ್ಗೊಳಲಿದ್ದು ಅಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸ್ ಇಲಾಖೆ ಬಿಗಿ ಬಂದೋಬಸ್ತ ವ್ಯವಸ್ಥೆಯನ್ನು ನೀಡುವಂತೆ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ್ ಬಾಗಲಕೋಟೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ನೀಡಿದರು. ಮಹಮ್ಮದಯುಸುಫ್ ಬಾಗವಾನ ಸೇರಿದಂತೆ ಮುಸ್ಲೀಂ ಸಮಾಜದ ಮುಖಂಡರು ಇದ್ದರು.