ಜಯನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಯೋಧರ ಸ್ಮಾರಕದ ಬಳಿ ದೇಶಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ರಾಜೇಶ್ ಬಿಎಸ್ ಎಫ್ ರಾಮ್ ,ಗುಡ್ಡು ಕುಮಾರ್ ,ವಿಕ್ರಂತ್, ಆದಿತ್ಯ, ಅಮಿತ್ ,ಸುನಿಲ್ ರಾಮ್,ಶಾಂತನ್ ಮೆಹತ್ ,ಸವನ್ ಕುಮಾರ್, ರವರ ಭಾವಚಿತಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಮುರಳಿ ಗೌಡಮಾತನಾಡಿ ಯೋದರೆಂದರೆ ನಿಜವಾದ ವೀರರು,ಅವರು ತಮ್ಮ ಸುಖ ಬದಿಗಿಟ್ಟು ದೇಶವನ್ನ ಕಾಯ್ದು ಭಾರತಾಂಬೆಯನ್ನ ನಮ್ಮನ್ನು ರಕ್ಷಿಸುವ ಕೆಲಸಮಾಡುತ್ತಿದ್ದಾರೆ ಅವರಿಗೆ ಈ ಶ್ರದ್ಧಾಂಜಲಿಯ ಮುಲಕ ಗೌರವ ಸೂಚಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.