ದೇಶಾದ್ಯಂತ ಜಿಎಸ್ಟಿ ಇಳಿಕೆಯಾದ ಹಿನ್ನೆಲೆ ಬಿಜೆಪಿ ತಾಲೂಕು ಘಟಕದ ವತಿಯಿಂದ ಸೋಮವಾರ ಪಟ್ಟಣದಲ್ಲಿ ವಿಜಯೋತ್ಸವವನ್ನು ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮಾಜಿ ಕೃಷಿ ಸಚಿವ ಬಿಸಿ ಪಾಟೀಲ, ಹಾಲು ಮೊಸರಿನಿಂದ ಹಿಡಿದು ಐಷಾರಾಮಿ ವಸ್ತುಗಳ ವರೆಗೆ ವಿಧಿಸುತ್ತಿದ್ದ ಜಿಎಸ್ಟಿ ಬಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದ ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಹೆಚ್ಚಿನ ಉಪಯೋಗ ಆಗಲಿದೆ ಎಂದು ಹೇಳಿದರು.