ಖಗ್ರಾಸ್ ಚಂದ್ರಗ್ರಹಣ ಹಿನ್ನೆಲೆ ಆಂಜನೇಯ ದೇವಸ್ಥಾನ ಬಂದ್ ಖಗ್ರಾಸ್ ಚಂದ್ರಗ್ರಹಣ ಹಿನ್ನೆಲೆ ಇವತ್ತು ಯಾದಗಿರಿ ನಗರದ ಆಂಜನೇಯ ದೇವಸ್ಥಾನ ಸಂಜೆ ಆರು ಗಂಟೆಗೆ ಬಂದ್ ಇರಲಿದೆ. ಇವತ್ತು ಎಂದಿನಂತೆ ಬೆಳಗ್ಗೆಯಿಂದಲೇ ಆಂಜನೇಯ ದೇವಸ್ಥಾನದಲ್ಲಿ ಪೂಜೆ, ಪುನಸ್ಕಾರಗಳು ನಡೆದಿವೆ. ಆದರೆ ಭಕ್ತರಲ್ಲಿ ಗೊಂದಲ ಉಂಟಾಗಿ ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಸಂಜೆ ಆರು ಗಂಟೆ ಹೊತ್ತಿಗೆ ಜಿಲ್ಲೆಯ ಬಹುತೇಕ ದೇವಸ್ತಾನ ಬಂದ್ ಆಗಲಿವೆ. ಮೈಲಾಪುರ ಮಲಯ್ಯ, ಲಕ್ಷ್ಮೀ ದೇವಸ್ಥಾನ, ಆಂಜನೇಯ ದೇವಸ್ಥಾನ ಎಲ್ಲವೂ ಬಂದ್ ಇರಲಿವೆ. ಗೃಹಣ ಮೋಕ್ಷದ ಬಳಿಕ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದೆಂದು ಆಂಜನೇಯ ದೇವಸ್ಥಾನದ ಅರ್ಚಕ ದೊಡ್ಡಯ್ಯಸ್ವಾಮಿ ತಿಳಿಸಿದ್ದಾರೆ.