ಮಲಪ್ರಭಾ ನದಿ ಪ್ರವಾಹದಿಂದ ಹಾನಿಗೊಳಗಾದ ಬಾದಾಮಿ ತಾಲೂಕಿನ ಗೋವನಕೊಪ್ಪದ ಗ್ರಾಮ ವಿವಿಧ ಕೃಷಿ, ತೋಟಗಾರಿಕೆ ಬೆಳೆ ಹಾಗೂ ಶಾಲಾ ಕೊಠಡಿಗಳನ್ನು ಜಿಲ್ಲಾಧಿಕಾರಿ ಸಂಗಪ್ಪ ಗುರುವಾರ ವೀಕ್ಷಣೆ ಮಾಡಿದರು. ಗೋವನಕೊಪ್ಪ ಗ್ರಾಮಕ್ಕೆ ಬೇಟಿ ನೀಡಿದ ಜಿಲ್ಲಾಧಿಕಾರಿಗಳು ಅತಿವೃಷ್ಟಿ, ಪ್ರವಾಹದಿಂದ ಸರ್ವೆ ನಂ.11/1ರ ಭೀಮಪ್ಪ ಹೂವಪ್ಪ ಯರಗೊಪ್ಪ ಅವರ ಜಮೀನಿನಲ್ಲಿ ಹಾನಿಯಾದ ಈರುಳ್ಳಿ ಬೆಳೆಯನ್ನು ವೀಕ್ಷಣೆ ಮಾಡಿದರು.ವಿವಿಧ ಜಮೀನುಗಳಲ್ಲಾದ ಬೆಳೆಹಾನಿ ವೀಕ್ಷಣೆ ಮಾಡಿದರು.