ಹಾಸನ :ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಪ್ರಶ್ನೆಗೆ ಧರ್ಮಸ್ಥಳದ ವಿಷಯದ ಬಗ್ಗೆ ಈಗ ಹೇಳಲ್ಲ, ರಾಜ್ಯ ಸರ್ಕಾರ ತನಿಖೆ ನಡೆಸುತ್ತಿದೆ. ಎರಡೂ ಸರ್ಕಾರಗಳು ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಳ್ಳುತ್ತಿದ್ದಾರೆ. ಧರ್ಮಸ್ಥಳದ ಬಗ್ಗೆ ನಮ್ಮದೇ ಆದ ಗೌರವವಿದೆ, ಕೆಲವರು ಅದರ ಶಕ್ತಿ ಹಾಳುಮಾಡಲು ಹೋಗಿದ್ದಾರೆ, ಸರ್ಕಾರ ಅದಕ್ಕೆ ಅವಕಾಶ ಕೊಡಬಾರದಿತ್ತು ಎಂದರು. ಡಾ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳವನ್ನು ಸರಿಯಾಗಿ ನಡೆಸಿಕೊಂಡು ಬಂದಿದ್ದಾರೆ. ರಾಜಕೀಯ ಮಾಡದೆ ಎಲ್ಲರನ್ನೂ ಸಮನಾಗಿ ನಡೆಸಿಕೊಂಡು ಬಂದಿದ್ದಾರೆ. ತಪ್ಪು ಮಾಡಿದಾಗ ಧರ್ಮಸ್ಥಳಕ್ಕೆ ಬಂದು ಸತ್ಯ ಮಾಡಿ ಅಂತಾರೆ, ನಾನೂ ಆಣೆ ಮಾಡಿರುವುದನ್ನು ನೋಡಿದ್ದೇನೆ. ಮಂಜುನಾಥಸ್ವಾಮಿಗೆ ಅಪಾರ ಶಕ್ತಿ ಇದೆ, ಆ ದೇವರ ಶಕ್ತಿ ಬಗ್ಗೆ ಮಾತನಾಡುವ ಶಕ್ತಿಯಿಲ್ಲ ಎಂದರು.