ಮದ್ದೂರಿನಲ್ಲಿ ಕಲ್ಲು ತೂರಿದವರನ್ನು ಬಿಟ್ಟು ಹಿಂದೂಗಳ ಮೇಲೆ ಲಾಠಿ ಚಾರ್ಜ್, ಇದು ಪಾಕಿಸ್ತಾನ ಸರ್ಕಾರ: ಕುಕ್ಕುವಾಡದಲ್ಲಿ ರೇಣುಕಾಚಾರ್ಯ ಆಕ್ರೋಶ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿದವರನ್ನು ಹೆಸರಿಗೆ ಮಾತ್ರ ಬಂಧಿಸಿ ಹಿಂದೂಗಳ ಮೇಲೆ ಹಿಂದೂ ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದ್ದು, ಇದು ಪಾಕಿಸ್ತಾನ ಸರ್ಕಾರ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ. ದಾವಣಗೆರೆ ತಾಲ್ಲೂಕಿನ ಕುಕ್ಕುವಾಡ ಗ್ರಾಮದಲ್ಲಿ ಸೋಮವಾರ ಸಂಜೆ 4 ಗಂಟೆಗೆ ಮಾತನಾಡಿದ ಅವರು, ಹಿಂದೂಗಳನ್ನು ಕೆಣಕಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.