ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಬೆಳೆ ಹಾನಿ ಆಗಲಿ ಬೆಳೆ ವಿಮೆ ನೋಂದಣಿಗಾಗಿ ಬೆಳೆವಿಮೆ ಕಂಪೆನಿ ಟೋಲ್ ಫ್ರೀ ಸಂಖ್ಯೆಗೆ ಅಥವಾ ಹುಮ್ನಾಬಾದ್, ಚಿತಗುಪ್ಪ ತಾಲೂಕಿನ ವಿಮೆ ಪ್ರತಿನಿಧಿಗಳಿಗೆ ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕ ಶರಣಕುಮಾರ ಅವರು ಬುಧವಾರ ರಾತ್ರಿ 8.30 ಕ್ಕೆ ಪ್ರಕಟಣೆ ಮೂಲಕ ಮನವಿ ಮಾಡಿದರು.