ಮಂಡ್ಯ ಜಿಲ್ಲೆಯ ಜೀವನಾಡಿ ಕೆ ಆರ್ ಎಸ್ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದ್ದು, 14886 ಕ್ಯೂಸೆಕ್ ದಾಖಲಾಗಿದೆ. ಶನಿವಾರ ಈ ಕುರಿತು ನಗರದಲ್ಲಿ ಕಾನೀನಿ ಮಾಹಿತಿ ನೀಡಿದ್ದು, ಕಾವೇರಿ ಕಣಿವೆಯಲ್ಲಿ ಮಳೆತ ಅಬ್ಬರ ಕಡಿಮೆಗೊಂಡ ಹಿನ್ನಲೆ ಒಳಹರಿವು ಕಡಿಮೆಗೊಂಡಿದೆ. ಪರಿಣಾಮ 14065 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ತಿಳಿಸಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಪೈಕಿ 123.72 ಅಡಿ ನೀರಿನ ಸಂಗ್ರಹವಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ 49.452 ಟಿಎಂಸಿ ಪೈಕಿ 47953 ಟಿಎಂಸಿ ಸಂಗ್ರಹವಿದ್ದು ಅದರಲ್ಲಿ ಬಳಕೆಗೆ ಯೋಗ್ಯವಾದ 39.574 ಟಿಎಂಸಿ ನೀರಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ಬಿದ್ದ ಮಳೆಗೆ ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.