ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್ ಮಾತನಾಡಿ ತಾಲ್ಲೂಕಿನಲ್ಲಿ ಜೂಜಾಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೊಳಗಾದವರು ಸಾಲಗಾರರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಶಾಸಕ ಸಿ.ಪುಟ್ಟರಂಗಶೆಟ್ಟಿಯವರು ಹೆಚ್ಚುತ್ತಿರುವ ಜೂಜಾಟಗಳ ಸ್ಥಗಿತಗೊಳಿಸಲು ಪೋಲಿಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು, ಇದು ಯಶಸ್ವಿಯಾದರೆ ಅವರು ಜನರ ಗೌರವವನ್ನಾದರೂ ಸಂಪಾದಿಸಬಹುದು, ಜೂಜಾಟ ಪ್ರಕರಣಗಳು ಹೆಚ್ಚಲು ಜಿಲ್ಲಾಪೋಲಿಸ್‌ವರಿಷ್ಠಾಧಿಕಾರಿ ಶಾಮೀಲಾಗಿರುವುದು ಕಾರಣ ಎಂಬ ಮಾಹಿತಿ ತಮಗೆ ಲಭ್ಯವಾಗಿದೆ ಎಂದರು