ಡಿಕೆಶಿ ಬಿಜೆಪಿಗೆ ಹೋಗುವುದಿದ್ದರೆ ಯಾವಾಗಲೂ ಹೋಗುತ್ತಿದ್ದರು ಎಂದು ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು. ಭಾನುವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿಕೆಶಿ ಅವರು ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾಗಿ ಅಭೂತಪೂರ್ವ ಕೆಲಸ ಮಾಡಿದ್ದಾರೆ. ಅವರನ್ನು ಸಿಎಂ ಮಾಡುವ ವಿಚಾರ ಹೈಕಮಾಂಡ್'ಗೆ ಬಿಟ್ಟಿದೆ. ಅದು ಬಿಜೆಪಿ ಪಕ್ಷ, ಮಾಧ್ಯಮಗಳ ನಿರ್ಣಯವಲ್ಲ ಎಂದು ಛೇಡಿಸಿದರು. ಡಿಕೆಶಿ ಅವರು ಒಬ್ಬ ಹಿಂದೂ, ಬಿಜೆಪಿಯವರು ನಾವೇ ಹಿಂದೂ ಅಂತರಷ್ಟೇ. ಇವರೆಲ್ಲರಿಗಿಂತ ಹಿಂದೂತ್ವಕ್ಕೆ, ಜನರಿಗೆ ಗೌರವ ಕಾಂಗ್ರೆಸ್ ನೀಡುತ್ತದೆ. ಬಿಜೆಪಿಯವರು ಹಿಂದೂತ್ವದಲ್ಲಿ ರಾಜಕಾರಣ ಮಾಡುತ್ತಾರೆ ಎಂದು ಟೀಕಿಸಿದರು. 136ರಿಂದ 138 ಶಾಸಕರ ಬೆಂಬಲದೊಂದಿಗೆ ರಾಜ್ಯ ಸರ್ಕಾರವಿದೆ ಎಂದರು.