ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಬುಧವಾರ ಬೆಳಗ್ಗೆ 11:40 ರ ಸುಮಾರಿಗೆ ಕಾವೇರಿ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಟ ಅನಿರುದ್ದ ಅವರು, ಅಭಿಮಾನ್ ಸ್ಟುಡಿಯೋ ದಲ್ಲಿರುವ ಹತ್ತು ಗುಂಟೆ ಜಾಗಕ್ಕಾಗಿ ಮನವಿ ಸಿಎಂ ಬಳಿ ಮಾಡಿದ್ದೇವೆ. ಆ ಜಾಗದಲ್ಲಿ ಮಂಟಪ ನಿರ್ಮಿಸಲು ಅನುಮತಿ ಕೊಡಿ ಎಂದು ಕೇಳಿದ್ದೇವೆ. ಹಿಂದೆ ಅಲ್ಲಿ ನಾವೇ ಸ್ಮಾರಕ ನಿರ್ಮಾಣ ಮಾಡಿದ್ದೇವು. ಈಗ ಅವಕಾಶ ಕೊಟ್ರೆ ನಾವೇ ನಿರ್ಮಾಣ ಮಾಡ್ತೇವೆ. ಇವಾಗ್ಲೂ ಜಾಗ ಕೊಟ್ಟರೆ ನಾವೇ ಮಂಟಪ ಕಟ್ಟಿಸಿಕೊಳ್ತೇವೆ. ಅರಣ್ಯ ಇಲಾಖೆಯ ಅಂಜುಮ್ ಪರ್ವೇಜ್ ಜೊತೆಗೂ ಸಿಎಂ ಮಾತಾಡಿದ್ದಾರೆ. ಅವರು ಕೂಡ ಸಕಾರಾತ್ಮಕ ವಾಗಿ ಸ್ಪಂದಿಸಿದ್ದಾರೆ ಎಂದರು.