ದಾಂಡೇಲಿ : ನಗರದಲ್ಲಿ ವಿವಿದೆಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳ ಪೈಕಿ 11ನೇ ದಿನದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯು ಶನಿವಾರ ರಾತ್ರಿ ಆರಂಭಗೊಂಡು ಭಾನುವಾರ ಬೆಳಿಗ್ಗೆ 5:30 ಗಂಟೆ ಸುಮಾರಿಗೆ ಗಣೇಶ ಮೂರ್ತಿಗಳನ್ನು ಕಾಳಿ ನದಿಯಲ್ಲಿ ವಿಸರ್ಜಿಸುವ ಮೂಲಕ ಸಂಪನ್ನಗೊಂಡಿತು. ನಗರದ ಜೆ.ಎನ್ ರಸ್ತೆಯ ಶ್ರೀ ಗಣೇಶ ಉತ್ಸವ ಸಮಿತಿ, ಕೆ.ಸಿ ವೃತ್ತದ ಸಾರ್ವಜನಿಕ ಗಣೇಶ ಉತ್ಸವ ಸಮಿತಿ, ಕುಳಗಿ ರಸ್ತೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಹಳಿಯಾಳ ರಸ್ತೆಯ ಶ್ರೀ ಗಜಾನನ ಯುವಕ ಮಂಡಳ, ನಗರ ಸಭೆ ಹಾಗೂ ಇನ್ನಿತರ ಉತ್ಸವ ಸಮಿತಿಗಳು ಪ್ರತಿಷ್ಠಾಪಿಸಿದ ಭವ್ಯ ಶ್ರೀ ಗಣೇಶನ ಮೂರ್ತಿಯನ್ನು ವಿಜೃಂಭಣೆಯ ಮೆರವಣಿಗೆಯ ಮೂಲಕ ಕುಳಗಿ ರಸ್ತೆಯ ಕಾಳಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.