ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮನೆ ಮನೆಗೆ ಪೊಲೀಸ್ ಯೋಜನೆಯ ಕುರಿತು ಔರಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ 1:30ಕ್ಕೆ ಠಾಣೆ ವ್ಯಾಪ್ತಿ ಮನೆ ಮನೆಗೆ ಮತ್ತು ಮಾರ್ಕೆಟ್ ಗೆ ತೆರಳಿ ಜನರಲ್ಲಿ ಯೋಜನೆಯ ಉದ್ದೇಶದ ಕುರಿತು ಜಾಗೃತಿ ಮೂಡಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನಿರ್ದೇಶನದ ಮೇರೆಗೆ ಅವರ ಪೊಲೀಸ್ ಠಾಣೆ ಪಿಎಸ್ಐ ವಸಿಂ ಪಟೇಲ್ ಹಾಗೂ ಸಿಬ್ಬಂದಿ ಜಾಗೃತಿ ಮೂಡಿಸಿದರು.