ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಕೆಲ ದಿನಗಳ ಹಿಂದ ಹುಲಿ ಪ್ರತ್ಯಕ್ಷವಾದ ಹಿನ್ನೆಲೆ ಬಿ.ಆರ್.ಟಿ ಅರಣ್ಯ ಅಧಿಕಾರಗಳಿಂದ ಜಾಗೃತಿ ಮೂಡಿಸಿದರು. ಒಂದು ಹುಲಿ ಓಡಾಡುತ್ತಿದ್ದು ಗ್ರಾಮಸ್ಥರು ಒಬ್ಬಬ್ಬರೇ ಓಡಾಡಬೇಡಿ, ರಾತ್ರಿ ಸಮಯದಲ್ಲಿ ಮನೆಯಿಂದ ಹೊರಗಡೆ ಬರಬೇಡಿ, ಶೌಚಾಲಯಗಳನ್ನು ಬಳಸಿ ಹಾಗೂ ಗುಂಪಾಗಿ ಓಡಾಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಜಾಗೃತಿ ಮೂಡಿಸಿದರು