ತಾಲೂಕಿನ ಪಾತಪಾಳ್ಯ ಹೋಬಳಿ ಗುಡಿಪಲ್ಲಿ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ಪುರಾತನ ಕಾಲದ ಜಡಮಡಗು ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ 5 ನೇ ಶ್ರಾವಣ ಶನಿವಾರ ಹಿನ್ನಲೆಯಲ್ಲಿ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.ಬೆಳಗ್ಗೆಯಿಂದ ಅರ್ಚಕ ಅಭಿಲಾಷ್ ಸ್ವಾಮಿರವರ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ,ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ,ಪಲ್ಲಕ್ಕಿ ಮೆರವಣಿಗೆ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಈ ವೇಳೆ ಭಾರತೀಯ ಸೇವಾ ಸಮಿತಿಯ ಕಾರ್ಮಿಕ ಘಟಕದ ರಾಷ್ಟ್ರಾಧ್ಯಕ್ಷ ಡಾ.ರಾಮಚಂದ್ರ,ರಾಜ್ಯಾಧ್ಯಕ್ಷ ಹಾಗೂ ಮಲ್ಲಿಗೆ ಫೌಂಡೇಷನ್ ಸಂಸ್ಥಾಪಕ ಅಂಜನಪ್ಪ ಯಾದವ್ ಮತ್ತಿತರರು ಇದ್ದರು.