ಭಟ್ಕಳ : ಅಕ್ರಮವಾಗಿ ಸಾಗಿಸುತ್ತಿದ್ದ 7 ಲಕ್ಷ ರೂ ಬೆಲೆಯ10 ಜಾನುವಾರುಗಳನ್ನು ಕಂಟೇನರ್ ಸಮೇತವಾಗಿ ವಶಕ್ಕೆ ಪಡೆದುಕೊಂಡು 4 ಆರೋಪಿಗಳ ಮೇಲೆ ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿರುವ ಬಗ್ಗೆ ಶುಕ್ರವಾರ ಸಂಜೆ 6:00 ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಭಟ್ಕಳದ ಅಬುಬಕ್ಕರ ಗಂಗಾವಳಿ, ಸಲಿಂ ಗಂಗಾವಳಿ, ಕೇರಳ ಕಾಸರಗೋಡಿನ ಹಮೀದ ಅಬ್ದುಲ್ಲಾ, ಉತ್ತರಪ್ರದೇಶದ ಆಸಿಪ್ ಮೊಹಮ್ಮದ್ ಅನೀಸ್ ಹಾಗೂ ಕಾಸರಗೋಡಿನ ಶಾಹುಲ್ ಹಮೀದ ಕೆ ಅಬ್ದುಲ್ಲಾ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅಕ್ರಮವಾಗಿ ಜಾನುವಾರುಗಳನ್ನು ಕೇರಳ ಕಡೆಯಿಂದ ಭಟ್ಕಳದ ಹನೀಫಾಬಾದ್ ಕಡೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಪೊಲೀಸರು ಮಹ