ನಾಡಿನೆಲ್ಲೆಡೆ ರಸಗೊಬ್ಬರಕ್ಕಾಗಿ ರೈತರು ಪರದಾಡುತ್ತಿರುವಂತೆ ಸುರಪುರ ನಗರದಲ್ಲೂ ರೈತರು ರಸಗೊಬ್ಬರ ಸಿಗದೇ ರಸ್ತೆಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ. ಗುರುವಾರ ಬೆಳಗ್ಗೆ ಸುರಪುರ ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯಲ್ಲಿನ ಎಪಿಎಂಸಿ ಗಂಜ್ ನಲ್ಲಿರುವ ಟಿಎಪಿಸಿಎಂಎಸ್ ಕಚೇರಿ ಮುಂದೆ ಆಗಮಿಸಿ ರಸಗೊಬ್ಬರಕ್ಕಾಗಿ ಮನವಿ ಮಾಡಿದ್ದಾರೆ ಪ್ರಸವ ಬರ ದೊರೆಯದೆ ಇರುವ ಕಾರಣ ಆಕ್ರೋಶಗೊಂಡ ರೈತರು ಎಪಿಎಂಸಿ ಗೇಟ್ ಮುಂಭಾಗದಲ್ಲಿನ ಬೀದರ್ ಶ್ರೀರಂಗಪಟ್ಟಣ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಸುರಪುರ ಠಾಣೆ ಪಿ ಐ ಉಮೇಶ ನಾಯಕ ಆಗಮಿಸಿ ರೈತರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದು,ಯಾವುದಕ್ಕೂ ಬಗ್ಗದೆ ರೈತರು ತಮ್ಮ ರಸ್ತೆ ತಡೆ ಮುಂದುವರೆಸಿ ರಸಗೊಬ್ಬರಕ್ಕಾಗಿ ಆಗ್ರಹಿಸುತ್ತಿದ್ದಾರೆ.