ಆಸ್ಪತ್ರೆ ಸುಧಾರಣೆ ಕುರಿತು ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಶಾಸಕ ದೇಶಪಾಂಡೆ ಹಗುರ ಪ್ರತಿಕ್ರಿಯೆ ನೀಡಿದ್ದು ಅದನ್ನು ಜೆ. ಎಂ. ಎಸ್ ಖಂಡಿಸುತ್ತದೆ ಎಂದು ಜೆಎಂಎಸ್ ಜಿಲ್ಲಾ ಉಪಾಧ್ಯಕ್ಷೆ ರೇಷ್ಮಾ ಹಂಸರಾಜ ತಿಳಿಸಿದ್ದಾರೆ. ದೇಶಪಾಂಡೆ ಹೇಳಿಕೆ ವಿರೋಧಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ಆರ್. ವಿ. ದೇಶಪಾಂಡೆ ಕ್ಷಮೆಯಾಚಿಸದಿದ್ದರೆ ಇಡೀ ರಾಜ್ಯದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಶುಕ್ರವಾರ ಸಂಜೆ 4:15ಕ್ಕೆ ಎಚ್ಚರಿಸಿದ್ದಾರೆ.