ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಭಾನುವಾರ ಮಧ್ಯಾನ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಪೊಲೀಸರಿಂದ ಪಥ ಸಂಚಲನ ನಡೆಸಲಾಯಿತು. ಲಿಂಗಸೂಗುರು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ನೇತೃತ್ವದಲ್ಲಿ ಮಸ್ಕಿ ಪೊಲೀಸ್ ಠಾಣೆಯಿಂದ ಆರಂಭಗೊಂಡು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮರಳಿ ಪೊಲೀಸ್ ಠಾಣೆ ವರೆಗೆ ಪಥ ಸಂಚಲನ ನಡೆಯಿತು. ಈ ಸಂದರ್ಭದಲ್ಲಿ ಸಿಪಿಐ ಬಾಲಚಂದ್ರ ಡಿ ಲಕ್ಕಮ್, ಮಸ್ಕಿ ಪಿಎಸ್ಐ ಕೆ ರಂಗಯ್ಯ, ಮುದಗಲ್ ಪಿ ಎಸ್ ಐ ವೆಂಕಟೇಶ ಮಾಡಿಗೇರಿ, ಲಿಂಗಸೂಗೂರ ಸಿ ಪಿ ಐ ಹೊಸಕೇರಪ್ಪ, ಹಟ್ಟಿ ಸಿಪಿಐ ಪುಂಡಲಿಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.