ಯುವಕನೊಬ್ಬ ಆನೆ ನಿಯಂತ್ರಣ ಕಂದಕಕ್ಕೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಆಡಿನಕೊಟ್ಟಿಗೆ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನ ನಾಗರಾಜ್ ತಿಳಿದು ಬಂದಿದ್ದು, ಆಡಿನಕೊಟ್ಟಿಗೆ ಗ್ರಾಮದ ದೇವಾಲಯದ ಬಳಿ ನಿನ್ನೆ ರಾತ್ರಿ ಗಣೇಶ ವಿಸರ್ಜನೆ ಬಳಿಕ ಗ್ರಾಮಸ್ಥರು ಸಭೆ ಸೇರಿದ್ದರು. ಸಭೆ ಬಳಿಕ ಅವರವರ ಮನೆಗೆ ಗ್ರಾಮಸ್ಥರು ತೆರಳಿದ್ದರು. ನಾಗರಾಜ್ ಮನೆಗೆ ಬಾರದೆ ನಾಪತ್ತೆಯಾದ ವಿಷಯ ತಿಳಿದು. ಬೆಳಗ್ಗೆಯಿಂದ ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು.ಶನಿವಾರ ಸಂಜೆ ನಾಗರಾಜ್ ಮೃತ ದೇಹ ಆನೆ ನಿಯಂತ್ರಣ ಕಂದಕದಲ್ಲಿ ಪತ್ತೆಯಾಗಿದೆ.