ದಾಂಡೇಲಿ : ವರ್ಷಕ್ಕೊಮ್ಮೆ ಬರುವ ಸಂಭ್ರಮ, ಸಡಗರದ ಹಬ್ಬವಾದ ಚೌತಿ ಹಬ್ಬದ ಸಂಭ್ರಮವು ತಾಲೂಕಿನೆಲ್ಲೆಡೆ ಮನೆ ಮಾಡಿದೆ. ಎಲ್ಲ ಧರ್ಮಿಯರು ಪರಸ್ಪರ ಸೌಹಾರ್ದತೆಯಿಂದ ಆಚರಿಸುವ ಸಂಭ್ರಮದ ಹಾಗೂ ಅತ್ಯಂತ ಪ್ರೀತಿಯ ಈ ಚೌತಿ ಹಬ್ಬದ ವೈಭವವನ್ನು ನೋಡಲು ದಾಂಡೇಲಿಗೆ ಬರಲೇಬೇಕು. ಇಡೀ ದಾಂಡೇಲಿಗೆ ದಾಂಡೇಲಿಯೇ ಜಾತಿ- ಮತ, ಭೇದ- ಭಾವ ಮರೆತು ಸರ್ವರು ಒಂದಾಗಿ ಶ್ರೀ ಗಣೇಶೋತ್ಸವ ಆಚರಿಸುವ ಪರಿಯಂತು ಸರ್ವಧರ್ಮ ಸಮನ್ವಯತೆಯನ್ನು ಸಾರುವಂತಿದೆ.