ಮಳವಳ್ಳಿ ತಾಲ್ಲೂಕಿನ ಹಲಗೂರಿನ ಸಂತೇಮಾಳ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆ.24 ರಂದು ನಡೆದ ಕೊಲೆ ಆರೋಪಿಯನ್ನು ಹಲಗೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಗ್ರಾಮದ ಸಬೀರ್ ಪಾಷಾ ಬಂಧಿತ ಆರೋಪಿ. ಮೈಸೂರು ಕುವೆಂಪು ನಗರ ನಿವಾಸಿ ರಂಗಸ್ವಾಮಿ ರವರ ಪುತ್ರ ರಮೇಶ್ ಚಿಂದಿ ಹಾಯ್ದುಕೊಂಡು ಹಲಗೂರಿನ ಶಾಲೆಯ ಹೊರಗೆ ಮಲಗುತ್ತಿದ್ದರು. ಆ.24 ರಂದು ಶುಕ್ರವಾರ ರಾತ್ರಿ ಶಾಲಾ ಕೊಠಡಿಯ ಅವರಣದಲ್ಲಿ ಮಲಗಿದ್ದ ರಮೇಶ್ ಅವರ ತಲೆಯ ಮೇಲೆ ದುಸ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಶನಿವಾರ ಬೆಳಿಗ್ಗೆ ಶಾಲೆ ತೆರೆಯಲು ಹೋದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜು ನ ಬಾಲದಂಡಿ, ಡಿ