ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಎವಿಎಂ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ 14 ವರ್ಷದ ದರ್ಶನ್ ಎಂಬ ಬಾಲಕ ಎವಿಎಂ ಹಾಸ್ಟೆಲ್ನಿಂದ ಆಗಸ್ಟ್ 18ರಂದು ಕಾಣೆಯಾಗಿದ್ದು ಇದುವರೆಗೆ ಆತನ ಸುಳಿವು ಸಿಕ್ಕಿಲ್ಲ ಈತನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಯನ್ನ ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆಯ ಮೂಲಕ ಬುಧವಾರ ತಿಳಿಸಿರುತ್ತಾರೆ. ಕಾಣೆಯಾಗಿರುವ ಬಾಲಕನ ಚಾರೆ 4.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾನೆ. ಈತನ ಬಗ್ಗೆ ಯಾರಿಗಾದರೂ ಮಾಹಿತಿ ಲಭ್ಯವಾದಲ್ಲಿ ಕೂಡಲೇ ಆಗುಂಬೆ ಪೊಲೀಸ್ ಠಾಣೆ ಅಥವಾ ಸಮೀಪದ ಪೊಲೀಸ್ ಠಾಣೆಯನ್ನ ಸಂಪರ್ಕಿಸುವಂತೆ ತಿಳಿಸಲಾಗಿದೆ.